ಧರ್ಮಪಾಲ 1

ಕ್ರಿ. ಶ. ಐದನೆಯ ಶತಮಾನದಲ್ಲಿದ್ದ ಈತ ಮಹಾಯಾನ ಬೌದ್ಧ ಪಂಡಿತ.  ವಸುಬಂಧುವಿನ ಪಂಥವನ್ನು ಹಿಡಿದು ವಿಜ್ಞಪ್ತಿಮಾತ್ರತಾಸಿದ್ಧಿಯೆಂಬ ಗ್ರಂಥಕ್ಕೆ ವ್ಯಾಖ್ಯೆಯೊಂದನ್ನು ಬರೆದಿದ್ದಾನೆ.  ಈತ ನಾಲಂದಾ ವಿದ್ಯಾಲಯದ ಅಧಿಪತಿಯಾಗಿದ್ದ ಕಾಲದಲ್ಲಿ ಚೀನೀ  ಯಾತ್ರಿಕ ಯುವಾನ್ ಛ್ವಾಂಗ್ ಭಾರತಕ್ಕೆ ಬಂದು ಇವನ ಬಳಿ ಅಧ್ಯಯನ ಮಾಡಿದ.  ಇವನು ಬರೆದ ವಿಜ್ಞಪ್ತಿಮಾತ್ರತಾಸಿದ್ಧಿಶಾಸ್ತ್ರವನ್ನು ಚೀನೀ ಭಾಷೆಗೆ ಅನುವಾದ ಮಾಡಿದ.  ಇಲ್ಲಿ ಧರ್ಮಪಾಲನನ್ನು ಬೋಧಿಸತ್ತ್ವನೆಂದು ಗೌರವದಿಂದ ವ್ಯವಹರಿಸಲಾಗಿದೆ.  ಪ್ರಮಾಣವಾರ್ತಿಕವನ್ನು ಬರೆದ ಧರ್ಮಕೀರ್ತಿಯೂ (ನೋಡಿ- ಧರ್ಮಕೀರ್ತಿ) ಮಾಧ್ಯಮಿಕ ಕಾರಿಕೆಗಳ ವ್ಯಾಖ್ಯಾತೃವಾದ ಚಂದ್ರಕೀರ್ತಿಯೂ ಇವನ ಶಿಷ್ಯರು.
(ಎಸ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ